ಕಾರವಾರ : ಸಲಬ್ರೆಟಿಗಳ ಬಗ್ಗೆ ಏನಾದರೂ ಕೇಳಿದ್ರೆ ಹೇಳಬಹುದು. ಆದ್ರೆ ಬಪೂನ್ ಗಳ ಬಗ್ಗೆ ಏನು ಹೇಳಲಿ ಎಂದು ಸಿದ್ದರಾಮಯ್ಯರ ಕುರಿತು ಅನಂತ ಕುಮಾರ್  ಹೆಗಡೆ ಪ್ರತಿಕ್ರಿಯಿಸಿರುವುದು ಸಮಿಶ್ರ ಸರಕಾರದಲ್ಲಿ ಆಗುತ್ತಿರುವ ರಾಜಕೀಯದ ಬಗ್ಗ ಕುರಿತು.

ಉತ್ತರ ಕನ್ನಡ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ  ಡಾಂಭಿಕತೆ ಅನಾವರಣ ಮುಂದಿನ ದಿನದಲ್ಲಾಗಲಿದೆ. ದೋಸ್ತಿ ಸರ್ಕಾರಕ್ಕೆ ಕಚ್ಚಾಟ ಮಿತಿಮೀರಿದ್ದು, ರಾಜ್ಯವನ್ನು ಮುಂದುವರೆಸಿಕೊಂಡು ಹೋಗುವ ಸಾಮರ್ಥ್ಯ ಈ ದೋಸ್ತಿ ಸರ್ಕಾರಕ್ಕೆ ಇಲ್ಲ. ಯಡಿಯೂರಪ್ಪ ಸಿಎಂ ಆಗಬೇಕು ಎನ್ನುವುದು ಕಾಲವೇ ತೀರ್ಮಾನ ಮಾಡಲಿದೆ ಎಂದರು