ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ‘ಉದ್ಯೋಗಿನಿ’ ಯೋಜನೆ ಅಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ 18 ವರ್ಷದಿಂದ 55 ವರ್ಷದೊಳಗೆ ವಯೋಮಿತಿ ಇರುವ ನಿರುದ್ಯೋಗಿ ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು ₹3 ಲಕ್ಷಗಳವರೆಗೆ ಸಹಾಯಧನ ಪಡೆಯಬಹುದಾಗಿದೆ. ಸಹಾಯಧನಕ್ಕಾಗಿ ಮಹಿಳೆಯರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂರ್ಪಕಿಸಿ, ಅರ್ಜಿ ಪಡೆದು, ಅಕ್ಟೋಬರ್ 23 ರೊಳಗೆ ಸಲ್ಲಿಸಬೇಕು.