ನವದೆಹಲಿ: ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಮೂರು ತಿಂಗಳು ಉಚಿತವಾಗಿ ಸಿಲಿಂಡರ್ ನೀಡಲು ಮುಂದಾಗಿತ್ತು. ಈಗ  ಸೆಪ್ಟೆಂಬರ್ ವರೆಗೆ ಸಿಲಿಂಡರ್ ಬಳಸಿಕೊಳ್ಳಲು ಅವಕಾಶ ನೀಡಿದೆ.

ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಕಾರಣ ಮೂರು ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಬಡವರು ತಿಂಗಳಿಗೆ ಒಂದು ಅಡುಗೆ ಸಿಲಿಂಡರ್ ಬಳಸದ ಕಾರಣ ಹಲವರ ಉಚಿತ ಸಿಲಿಂಡರ್ ಗಳು ಬಾಕಿ ಉಳಿದಿದ್ದು ಸೆಪ್ಟಂಬರ್ ವರೆಗೂ ಸಿಲಿಂಡರ್ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.