ಬೆಂಗಳೂರು. ಪ್ರತಿಪಕ್ಷಗಳು ರೈತರ ಸಾಲ ಮನ್ನಾ ಯಾವಾಗ ಅಂತ ಹೇಳುತ್ತಿದ್ದವು ಆದ್ರೆ  : ಜುಲೈ 5 ರಂದು ಮಂಡನೆಯಾಗಲಿರುವ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ನಲ್ಲಿ ಸಹಕಾರಿ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಿಂದ ರೈತರು ಪಡೆದಿರುವ ಬೆಳೆ ಸಾಲಮನ್ನಾ, ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 2009 ಏಪ್ರಿಲ್ 1 ರಿಂದ 2018 ಮೇ 31 ರವರೆಗೆ ಸಹಕಾರಿ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ರೈತರು ಪಡೆದುಕೊಂಡಿರುವ ಬೆಳೆಸಾಲವನ್ನು ಮನ್ನ ಮಾಡಲು ದೋಸ್ತಿ ಪಕ್ಷಗಳು ಸಮ್ಮತಿಸಿವೆ.

ಇದರಿಂದಾಗಿ ಸಾಲಮನ್ನಾ ಹಾಗೂ ಬಜೆಟ್ ಮಂಡನೆ ಮಾಡುವ ಬಗ್ಗೆ ದೋಸ್ತಿ ಸರ್ಕಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನವಾಗಿದೆ. ಶುಕ್ರವಾರ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ನಡೆದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿ.ಎಂ.ಪಿ) ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.

( ಸಾಂದರ್ಭಿಕ ಚಿತ್ರ)