ಬೆಂಗಳೂರು: ಬಜೆಟ್ ನಲ್ಲಿ ಹೇಳಿದ ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಸಿದಂತೆ ಈ ಯೋಜನೆಯಲ್ಲಿ ಕೆಲ ಷರತ್ತುಗಳನ್ನು ಒಡ್ಡಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಬಂಪರ್ ಕೊಡುಗೆ ನೀಡಲು ಕುಮಾರಸ್ವಾಮಿ ಮುಂದಾಗಿದ್ದಾರೆಂದು  ತಿಳಿದುಬಂದಿದೆ.

ಸುಸ್ತಿ ಸಾಲದ ಜೊತೆಗೆ ಚಾಲ್ತಿ ಸಾಲವನ್ನೂ ಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿರ್ಧರಿಸಿದ್ದು, ಜೊತೆಗೆ ಸಾಲ ನವೀಕರಿಸಿಕೊಂಡ ರೈತರಿಗೂ ಕೊಡುಗೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರದ ಈ ನಿರ್ಧಾರದಿಂದ ಸಾಲ ಮನ್ನಾ ಯೋಜನೆಗೆ ಬಜೆಟ್ ನಲ್ಲಿ ಘೋಷಿಸಿದ್ದ 34 ಸಾವಿರ ಕೋಟಿ ರೂ. ಜೊತೆಗೆ ಇನ್ನೂ 8-10 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆಯಂತೆ. ಹಾಗಾಗಿ ನಾಳೆಯಿಂದ ಬಜೆಟ್ ಚರ್ಚೆ ಪ್ರಾರಂಭವಾಗಲಿದೆ ಆಗ ರೈತರಿಗೆ ಯಾವ ಬಂಪರ್ ಸಿಗಬಹುದು ಎಂಬುದು ಕಾದು ನೋಡಬೇಕಿದೆ.