ಕೊಪ್ಪಳ: ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕರೆಕೊಟ್ಟಿದ್ದ ಬಂದ್ ಗೆ ಸಂಸದ ಕರಡಿ ಸಂಗಣ್ಣಡಿವೈಎಸ್ಪಿ ಅಧಿಕಾರಿಯ ಕೊರಳಪಟ್ಟಿ ಹಿಡಿದು ಎಳೆದಾಡಿರುವ ಘಟನೆ ನಡೆದಿದೆ.

ಕೊಪ್ಪಳ ನಗರ ಪೋಲಿಸ್ ನಗರ ಠಾಣೆಯ ಮುಂಭಾಗದಲ್ಲಿ ಬಂದ್ ವಿಚಾರವಾಗಿ ನೆಡೆದ ವಾಗ್ವಾದವೇಳೆ ಬಿಜೆಪಿ ಸಂಸದ ಕರಡಿ ಸಂಗಣ್ಣ ಡಿವೈಎಸ್ಪಿ ಸಂದಿಗವಾಡ್ ಅವರ ಕೊರಳಪಟ್ಟಿಗೆ ಕೈ ಹಾಕಿ ಎಳೆದಾಡಿದ್ದಾರೆ.

ಬಂದ್ ವೇಳೆ ಬಳಸುತ್ತಿದ್ದ ಪರವಾನಿಗೆ ಇಲ್ಲದ ಆಟೋವನ್ನು ವಶ ಮಾಡಿಕೊಂಡ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಸಂಸದ ಕರಡಿ ಸಂಗಣ್ಣ ಹಾಗೂ ಬಿಜೆಪಿ ಕಾರ್ಯಕರ್ತರು ಪೋಲಿಸ್ ಠಾಣೆಗೆ ಆಗಮಿಸಿ ಆಟೋ ವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇದೇ ವೇಳೆ ಪೋಲಿಸರು ಕರಡಿ ಸಂಗಣ್ಣ ಅವರನ್ನು ನಡೆದ ಘಟನೆ ಬಗ್ಗೆ ಮಾಹಿತಿ ನೀಡಲು ಮುಂದಾದ ವೇಳೆಯಲ್ಲಿ ಏಕಾಏಕಿ ಪೋಲಿಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿ ಕೊರಳಪಟ್ಟಿ ಹಿಡಿದುಕೊಂಡು ಎಳೆದಾಡಿದ್ದಾರೆ. ಇದು ಬಿಜೆಪಿ ಯವರ ಬಂದ್ ಝಲಕ್.!