ಮುಂಬೈ : ಬಂಜಾರ ಸಮುದಾಯದ ಪ್ರಸಿದ್ಧ ಧಾರ್ಮಿಕ ಸಂತ ಶ್ರೀ ರಾಮರಾವ್ ಜೀ ಮಹಾರಾಜ್ (84) ಶುಕ್ರವಾರ ನಿಧನರಾಗಿದ್ದಾರೆ.

ಸುಮಾರು 12 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಶ್ರೀಗಳು, ಮೂಢನಂಬಿಕೆ ವಿರುದ್ಧ ಜಾಗೃತಿ, ಸಾಕ್ಷರತೆಗೆ ಪ್ರೋತ್ಸಾಹ, ವರದಕ್ಷಿಣೆ ವಿರುದ್ಧ ವ್ಯಪಾಕ ಸಮರ ಸಾರಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ರಾಮರಾವ್ ಜೀ ಮಹಾರಾಜ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕಳೆದ 1 ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 11 ಗಂಟೆಗೆ ನಿಧನರಾಗಿದ್ದಾರೆ.