ಚಿಕ್ಕೋಡಿ: ಹಾಗಾದರೆ ಇನ್ನೇಕ ತಡ ೀ ಸುದ್ದಿ ಓದಿ.  ನಮ್ಮ ರಾಜ್ಯದ ಪಕ್ಕದ ರಾಜ್ಯ ದ ಮಹಾರಾಷ್ಟ್ರದ ಜಿಲ್ಲಾ ಕೇಂದ್ರವಾದ ಸಾಂಗಲಿ ನಗರದ ಮಾಳ ಭಾಗದಲ್ಲಿರುವ ಉಸ್ತ್ರಾ ಸಲೂನ್ ಮಾಲೀಕ ರಾಮಚಂದ್ರ ಕಾಶಿದ್ ಅವರೇ ಈ ಕ್ಷೌರಿಕ. 3.50 ಲಕ್ಷ ರೂ. ಮೌಲ್ಯದ 11 ತೊಲೆ ಬಂಗಾರದಲ್ಲಿ ಮಾಡಿಸಿದ ಬಂಗಾರದ ಕತ್ತಿಯಿಂದ ಜನರ ಕ್ಷೌರ ಮಾಡುತ್ತಾರೆ.

ಇಂಥ ಸೇವೆ ನೀಡಬೇಕೆಂಬ ಆಲೋಚನೆ ಅವರಿಗೆ ಮೊಳೆತಿದ್ದು ವಿಶೇಷ ಸಂದರ್ಭವೊಂದರಲ್ಲಿ. ರಾಮಚಂದ್ರ ತನ್ನ ತಂದೆ-ತಾಯಿಯ 33ನೇ ಮದುವೆ ವಾರ್ಷಿಕೋತ್ಸವದ ನಿಮಿತ್ತ ಬಂಗಾರದ ಕತ್ತಿಯನ್ನು ಮಾಡಿಸಿ ತಂದೆಯ ಕ್ಷೌರ ಮಾಡುವ ಮೂಲಕ ಬಂಗಾರದ ಕತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದರು.

ಈ ಸುದ್ದಿ ಹೇಗೂ ಜನರ ಬಾಯಿಂದ ಬಾಯಿಗೆ ಹರಿದಾಡಿತು. ಎಷ್ಟೇ ದುಡ್ಡುಕೊಟ್ಟರು ಸರಿ ಬಂಗಾರದ ಕತ್ತಿಯಿಂದ ಕ್ಷೌರಮಾಡಿಸಿಕೊಳ್ಳಬೇಕೆಂದು ಬೇರೆ ಬೇರೆ ಊರುಗಳಿಂದ ಜನರು ಬರುತ್ತಿದ್ದಾರೆ. ಕ್ಷೌರ ಒಂದಕ್ಕೆ 200 ರೂಗಳು.

ಈಗ ಕತ್ತಿಗೆ ಹಾಕುವ ಬ್ಲೇಡ್ ಮಾಮೂಲಿ ಮುಂದಿನ ದಿನಗಳಲ್ಲಿ ಬಂಗಾರ ಲೇಪಿತ ಬ್ಲೇಡ್ ನಿಂದ ಕ್ಷೌರಮಾಡುತ್ತೇವೆ ಎಂದು ರಾಮಚಂದ್ರ ಕಾಶಿದ್ ಹೇಳಿಕೆ ಏನಿ ಹೌ ಜೀವನದಲ್ಲಿ ಬಂಗಾರ ಕತ್ತಿಂದ ಕ್ಷೌರಮಾಡಿಸೊಂಡದ್ದನ್ನು ನೆರೆಹೊರೆಯವರಿಗೂ ಹೇಳಬಹುದು ಹೆಮ್ಮಪಡಬಹುದಲ್ಲವೆ. ಇನ್ನೇಕ ತಡ ಹೊರಡಿ.