ಚಿತ್ರದುರ್ಗ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಟವೇರಾ ಕಾರು ಜಪ್ತಿಮಾಡಿದ ಸಂದರ್ಭದಲ್ಲಿ 14 ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಿತ್ರದುರ್ಗದಿಂದ ದಾವಣಗೆರೆ ಕಡೆ ತೆರಳುತ್ತಿದ್ದ ವಾಹನವನ್ನು ತಪಾಸಾಣೆಮಾಡಿದಾಗ ಈ ಹಣ ಸಿಕ್ಕದೆ.

ಚಿತ್ರದುರ್ಗ ಎಸ್ಪಿ ಶ್ರೀನಾಥ ಜೋಶಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದ್ದು,

ಫ್ಲೈಯಿಂಗ್ ಸ್ಕ್ವಾಡ್ ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಾರು ಜಪ್ತಿ ಮಾಡಲಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದಬಂದಿದೆ.

(ಸಾಂದರ್ಭಿಕ ಚಿತ್ರ)