ಬೆಂಗಳೂರು : ವಿಶ್ವದ ದೈತ್ಯ ಸಾಮಾಜಿಕ ಜಾಲತಾಣ ಕಂಪನಿ ಫೇಸ್ ಬುಕ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ವೊಂದನ್ನು ನೀಡಿದ್ದು, ಫೇಸ್ ಬುಕ್ ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ.

ಹೌದು, ಫೇಸ್ ಬುಕ್ ಬಳಸುವವರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕಂಪ್ಯೂಟರ್ ನಲ್ಲಿ ಫೇಸ್ ಬುಕ್ ಬಳಸುವವರು ರಾತ್ರಿ ವೇಳೆ ಡಾರ್ಕ್ ನೈಟ್ ಮೋಡ್ ಗೆ ಬದಲಿಸಿಕೊಳ್ಳುವ ಹೊಸ ಫೀಚರ್ ಅನ್ನು ಫೇಸ್ ಬುಕ್ ನೀಡಿದೆ.

ಫೇಸ್ ಬುಕ್ ನೀಡಿರುವ ಡಾರ್ಕ್ ನೈಟ್ ಮೋಡ್ ನಿಂದ ಬಳಕೆದಾರರ ಕಣ್ಣಿನ ಮೇಲೆ ಒತ್ತಡ ಬೀಳುವುದು ಕಡಿಮೆಯಾಗಲಿದೆ. ಅಲ್ಲದೇ ವೇಗವಾಗಿ ಬೇರೆ ವಿಭಾಗಗಳಿಗೆ ಹೋಗಬಹುದು, ಫೇಸ್ ಬುಕ್ ವೇಗವೂ ಜಾಸ್ತಿಯಾಗಿರಲಿದೆ ಎಂದು ಫೇಸ್ ಬುಕ್ ಸಂಸ್ಥೆ ಹೇಳಿದೆ.