ಬೆಂಗಳೂರು: ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಆರಂಭಗೊಳ್ಳಬೇಕಿದ್ದ 2020-21 ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿಲ್ಲ. ಹೀಗಾಗಿ ನಾಳೆಯಿಂದ ಚಂದನ ವಾಹಿನಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸೇತು ಬಂಧ ಪ್ರಸಾರವಾಗಲಿದೆ.

8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ `ಸೇತುಬಂಧ’ ಪ್ರಸಾರವಾಗಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 9.30 ರಿಂದ 11 ರವರೆಗೆ ಹಾಗೂ 11.30 ರಿಂದ 12 ಗಂಟೆವರೆಗೆ, ನಂತರ ಮಧ್ಯಾಹ್ನ 3 ರಿಂದ 4.30 ಹಾಗೂ ಸಂಜೆ 5 ರಿಂದ 5.30 ರವರೆಗೆ ತರಗತಿ ನಡೆಯಲಿವೆ