ಮೈಸೂರು: ಇತ್ತೀಚಿಗೆ ಪ್ರೀ ವೆಡ್ಡಿಂಗ್ ಫೋಟೋಗ್ರಫಿ ಕ್ರೇಜ್ ಮೈಸೂರಿನ ಕ್ಯಾತಮಾರನಹಳ್ಳಿ ಯುವಕ ಚಂದ್ರು ಹಾಗೂ ಶಶಿಕಲಾ ಎಂಬ ವಧು ವರರು ತಲಕಾಡಿನಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ತೆಪ್ಪ ಮುಗುಚಿಕೊಂಡ ಪರಿಣಾಮ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ತೆಪ್ಪ ನಡೆಸುತ್ತಿದ್ದ ವ್ಯಕ್ತಿ ಈಜಿ ದಡ ಸೇರಿದ್ದಾನೆ. ಅವಘಡದಿಂದಾಗಿ ನವ ಜೋಡಿಯ ಬದುಕು ಆರಂಭಕ್ಕೂ ಮುನ್ನವೇ ದುರಂತ ಅಂತ್ಯ ಕಂಡಂತಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಲಕಾಡು ಠಾಣೆ ಪೊಲೀಸರು, ತಜ್ಞರ ಸಹಾಯ ಪಡೆದು ಶವಗಳನ್ನು ಹೊರತೆಗೆದಿದ್ದಾರೆ.

ಫೋಟೋಗೆ ಪೋಸ್ ಕೊಡುವ ಗುಂಗಿನಲ್ಲಿ ವರ ತೆಪ್ಪದ ಒಂದು ಬದಿಗೆ ವಾಲಿದಾಗ ಆಯತಪ್ಪಿ ತೆಪ್ಪ ಮುಗುಚಿಕೊಂಡಿದೆ. ವಧುವಿನ ಅಕ್ಕ ತಮ್ಮ ಹಾಗು ಛಾಯಾಗ್ರಾಹಕರ ಕಣ್ಣೆದುರಲ್ಲೇ ನವಜೋಡಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.