ಬೆಂಗಳೂರು:ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಹತೆ ಇರಬೇಕೆಂದ್ರೆ. ಬಿ.ಇಡಿ ಪದವಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಗಳಿಸಿರಲೇಬೇಕು ಎಂದು ಎನ್‌ಸಿಟಿಇ ಇದ್ದುಪಡಿಮಾಡಿದೆ.

ಎನ್‌ಸಿಟಿಇ ಯ ಹೊಸನಿಯಮದ ಪ್ರಕಾರ ‘ಬಿ.ಇಡಿ ಮತ್ತು ಪ್ರೌಢಶಿಕ್ಷಣದಲ್ಲಿ ಶೇ 50 ಅಂಕ ಪಡೆದಿರಬೇಕು’ಎಂದು ಎನ್‌ಸಿಟಿಇ ಇತ್ತೀಚಿನ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದೆ.

ದೇಶದ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಗುಣಮಟ್ಟದ ಶಿಕ್ಷಕರನ್ನು ನೇಮಕ ಮಾಡುವುದು ಈ ಹೊಸ ನಿಯಮದ ಉದ್ದೇಶವಾಗಿದೆ. ಶಿಕ್ಷಕರಾಗಿ ನೇಮಕಗೊಂಡ ಎರಡು ವರ್ಷಗಳ ಒಳಗೆ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಮಿತಿ ಅನುಮೋದಿತ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ 6 ತಿಂಗಳ ಬ್ರಿಡ್ಜ್‌ ಕೋರ್ಸ್‌ ಮಾಡಬೇಕಿರುವುದು ಖಾಯಂ ಹಾಗಾಗಿ ಬಿ.ಇಡಿ ಪದವಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ನಿಮ್ಮ ಅಂಕ 50 ರಷ್ಟು ಇರಲಿ..