ಬೆಂಗಳೂರು: ಇದೇನಪ್ಪ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಕೇಸ್ ಹಾಕ್ತರಾ ಅಂತ ಹುಬ್ಬೇರಿಸುವ ಅಗತ್ಯವಿಲ್ಲ. ಏಕೆಂದ್ರೆ ಇಂಹದ್ದೊಂದು ಸುಳಿವು ನೀಡಿದ್ದು ವಿ.ಎಸ್.ಉಗ್ರಪ್ಪ.

ಕೆ.ಪಿ.ಸಿಸಿ.ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯರ ಮೇಲೆ ಇಲ್ಲ ಸಲ್ಲದ ಆರೋಪಮಾಡಿದ್ದಾರೆ. ಸೀದಾ ರೂಪಾಯಿ ಸರಕಾರ 10% ಸರಕಾರ ಅಂತ ಬಹಿರಂಗ ಸಭೆಗಳಲ್ಲಿ ಹೇಳುತ್ತಿದ್ದಾರೆ.

ಹಾಗಾಗಿ ನರೇಂದ್ರ ಮೋದಿಯವರ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೋಡಲಾಗುವುದು ಎಂದು ಹೇಳಿದ್ದಾರೆ. 10% ಸರಕಾರ ಎಂದು ಹೇಳಿರುವ ಮೋದಿಯವರು ದಾಖಲೆ ಸಮೇತ ತೋರಿಸಲಿ ಇಲ್ಲವಾದರೆ  ಕ್ಷಮಾಪಣೆ ಕೇಳಬೇಕು ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.