ನವದೆಹಲಿ : ದೇಶದ ಎಲ್ಲಾ ಸಂಸದರ ಸಂಬಳವನ್ನು ಶೇ.30ರಷ್ಟು ಪ್ರಧಾನಿ ಪರಿಹಾರ ನಿಧಿಗಾಗಿ ನೀಡುವ ಸಲುವಾಗಿ, ಏಪ್ರಿಲ್ 1ರಿಂದಲೇ ಕಟ್ ಮಾಡಲಾಗುತ್ತಿದೆ. ಇದರೊಂದಿಗೆ ಮುಂದಿನ ಎರಡು ವರ್ಷಗಳ ಕಾಲ ಸಂಸದರ ನಿಧಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾವಡೇಕರ್, ಎಲ್ಲಾ ಸಂಸದರ ಸಂಬಳ ಕಡಿತ ಮಾಡಲಾಗುತ್ತಿದೆ. ಸಂಸದರ ಶೇ.30ರಷ್ಟು ವೇತನ ಕಡಿತ ಮಾಡಲಾಗುತ್ತಿದೆ. 2 ವರ್ಷ ಸಂಸದರ ಸಂಬಳದಲ್ಲಿ ಕಡಿತ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ, ಉಪ ರಾಷ್ಟ್ರವತಿಯಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತದೆ. ಶೇ.30ರಷ್ಟು ಸಂಬಳ ಪ್ರಧಾನಿ ಪರಿಹಾರ ನಿಧಿಗೆ ನೀಡಲಾಗುತ್ತದೆ. ವೇತನ ಕಡಿತ ಮಾಡಲು ಸಂಪುಟ ನಿರ್ಧಾರ ಕೈಗೊಳ್ಳಲಾಗಿದೆ. ಏಪ್ರಿಲ್ 1ರಿಂದಲೇ ಸಂಸದರ ವೇತನ ಕಟ್ ಮಾಡಲಾಗುತ್ತಿದೆ. 7,900 ಕೋಟಿ ರೂಪಾಯಿ ಸಂಗ್ರಹ ಆಗಲಿದೆ. ಇದನ್ನು ಪಿಎಂ ಪರಿಹಾರ ನಿಧಿಗಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.