ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ಮಾಜಿ ಪ್ರಧಾನಿ ದೇವೇಗೌಡರು ಮಾನಸಿಕ ವೇದನೆ ನೀಡುವ ಮೂಲಕ ಅಡ್ವಾಣಿಯನ್ನು ಮೂಲೆಗುಂಪು ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

ಹಿರಿಯರಿಗೆ ಮೋದಿ ನೀಡುತ್ತಿರುವ ಗೌರವ ಅವರ ಸಂಸ್ಕೃತಿಯನ್ನು ತೋರುತ್ತದೆ . ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧಾರ ಮಾಡಿದ್ದೆ. ಆದರೆ, ಮಹಾಘಟಬಂಧನ್ ಮುನ್ನಡೆಸಲು ಲೋಕಸಭೆಯಲ್ಲಿ ಇರಬೇಕು ಎಂಬ ನಾಯಕರ ಒತ್ತಡಕ್ಕೆ ಮಣಿದು ಈ ಬಾರಿ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.