ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಕಳೆದ 3 ವರ್ಷಗಳಲ್ಲಿ ಕೈಗೊಂಡ ವಿದೇಶ ಪ್ರವಾಸದ ವಿಮಾನದ ವೆಚ್ಚದ ಕುರಿತು ರಾಜ್ಯ ಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ವಿದೇಶಾಂಗ ವ್ಯವಹಾರದ ರಾಜ್ಯ ಸಚಿವ ವಿ.ಮುರಳೀಧರನ್ ರಾಜ್ಯಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಮೂರು ವರ್ಷಗಳಲ್ಲಿ ಮೋದಿಯವರ ವಿದೇಶ ಪ್ರಯಾಣಕ್ಕೆ ಬಳಸಿದ ಚಾರ್ಟೆಡ್ ಫ್ಲೈಟ್ಸ್ ಗಳಿಗೆ ಸುಮಾರು 255 ಕೋಟಿ ರೂ. ಖರ್ಚಾಗಿದೆ ಎಂದು ಹೇಳಿದ್ದಾರೆ.

2016-17 ರಲ್ಲಿ 76.27 ಕೋಟಿ, 2017-18 ರಲ್ಲಿ 99.32 ಕೋಟಿ ಹಾಗೂ 2018-19 ರಲ್ಲಿ 79.91 ಕೋಟಿ ರೂ. ವ್ಯಯ ಮಾಡಲಾಗಿದೆ. ಹಾಟ್ ಲೈನ್ ಸೌಲಭ್ಯಕ್ಕಾಗಿ 2016-17 ರಲ್ಲಿ 2,24, ಹಾಗೂ 2017-18 ರಲ್ಲಿ 58,06,630 ರೂ. ಖರ್ಚು ಮಾಡಲಾಗಿದೆ ಎಂದು ಮುರುಳೀಧರನ್ ಮಾಹಿತಿ ನೀಡಿದ್ದಾರೆ.