ಚಿತ್ರದುರ್ಗ.:ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ “ಆನ್‍ಲೈನ್ ಇಂಟರ್ ಆ್ಯಕ್ಟೀವ್ ಕೌನ್ಸಿಲಿಂಗ್” ಮೂಲಕ 2018-19ನೇ ಸಾಲಿನಲ್ಲಿ ಪ್ರಥಮ ಡಿಪ್ಲೊಮಾ ತರಗತಿಗಳಿಗೆ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಹೆಚ್ಚಿನ ನಿವರಗಳಿಗೆ ಹಾಗೂ ಅರ್ಜಿ ಮತ್ತು ಮಾಹಿತಿ ಪುಸ್ತಕವನ್ನು ಇಲಾಖೆಯ ವೆಬ್‍ಸೈಟ್ www.dte.nic.in ಮತ್ತು www.kea.kar.nic ಇಲ್ಲಿ ಮೇ 5 ರಿಂದ 28 ರವರೆಗೆ ಡೌನ್‍ಲೋಡ್ ಮಾಡಿಕೊಳ್ಳಬಹುದು. ಅರ್ಜಿಗಳನ್ನು ಸಂಸ್ಥೆಯಲ್ಲಿ ವಿತರಿಸಲಾಗುವುದಿಲ್ಲ. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಮೇ 28 ರ ಸಂಜೆ 5:30 ರೊಳಗಾಗಿ ಈ ಸಂಸ್ಥೆಯ ಕಛೇರಿಗೆ ಸಲ್ಲಿಸಬೇಕೆಂದು ಚಿತ್ರದುರ್ಗ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ತಿಳಿಸಿದ್ದಾರೆ.
ಅರ್ಜಿ ಶುಲ್ಕ: ಜಿ.ಎ/ವರ್ಗ 2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳಿಗೆ ರೂ. 100, ಎಸ್.ಸಿ. ಎಸ್.ಟಿ ಮತ್ತು ಪ್ರವರ್ಗ- ವಿದ್ಯಾರ್ಥಿಗಳಿಗೆ ರೂ. 50 , ನಿಗದಿತ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದೇ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳಲ್ಲಿ ಈ ಕೆಳಕಂಡ ಕೋಷ್ಥದಲ್ಲಿನ ಖಾತೆಗೆ ಪಾವತಿಸಿ counter Foil ಪಡೆದುಕೊಂಡು ಅರ್ಜಿ ಸಲ್ಲಿಸುವಾಗ ಅರ್ಜಿಯ ಜೊತೆಗೆ ಲಗತ್ತಿಸಬೇಕು. ಬ್ಯಾಂಕ್: ಭಾರತೀಯ ಸ್ಟೇಟ್ ಬ್ಯಾಂಕ್ ಮಲ್ಲೇಶ್ವರಂ ಶಾಖೆ ಬೆಂಗಳೂರು, ಖಾತೆಯ ಹೆಸರು:ED-KEA-DCET-2018 Application fee collection Account, ಖಾತೆ ಸಂಖ್ಯೆ:36843662415, ifsc codeಎಸ್.ಎಸ್.ಎಲ್.ಸಿ.ಯ ಹಾಗೂ ಇತರೆ ಎಲ್ಲಾ ಮೂಲ ದಾಖಲಾತಿಯೊಂದಿಗೆ ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳ ಸಹಿತ ಇತ್ತೀಚಿನ 4 ಪಾಸ್‍ಪೋರ್ಟ್ ಫೋಟೊಗಳೊಂದಿಗೆ ಪರಿಶೀಲನೆಗಾಗಿ ಸಲ್ಲಿಸಬೇಕು.
ವಿಶೇಷ ಸೂಚನೆ: ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಜಿಲ್ಲೆಯ ಯಾವುದಾದರೂ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಸಲ್ಲಿಸಬಹುದು. ಅಭ್ಯರ್ಥಿಯು ಸಮೀಪದ 11 ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ “ಆನ್‍ಲೈನ್ ಇಂಟರ್ ಆ್ಯಕ್ಟೀವ್ ಕೌನ್ಸಿಲಿಂಗ್ ಕೇಂದ್ರ/ಪ್ರವೇಶ ಘಟಕ”(Online Interactive cum Admission Nodal Center) ಗಳಲ್ಲಿ ಕೌನ್ಸಿಲಿಂಗ್‍ಗೆ ಹಾಜರಾಗಿ ತಮ್ಮ ಇಚ್ಛೆಗನುಗುಣವಾಗಿ ರಾಜ್ಯದ ಯಾವುದೇ ಸರ್ಕಾರಿ/ಅನುದಾನಿತ/ಖಾಸಗಿ ಪಾಲಿಟೆಕ್ನಿಕ್ ಮತ್ತು ಕೋರ್ಸ್‍ನ್ನು ಆಯ್ಕೆ ಮಾಡಿಕೊಳ್ಳುವುದು