ಬೆಂಗಳೂರು: ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಸಂಪುಟದಲ್ಲಿ ಮಹತ್ಚದ ಸಭೆ ನಡೆಯಲಿದೆ. ಈ ವಿಷಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯರು ಯಾವ ನಡೆಯನ್ನು ಅನುಸರಿಸುತ್ತಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಕೇಂದ್ರಕ್ಕೆ  ಶಿಫಾರಸ್ಸು ಮಾಡಲು ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ   ಅವರನ್ನು ರವಿವಾರ  ಅವರ ಗೃಹಕಚೇರಿ  ಕೃಷ್ಣಾದಲ್ಲಿ ಭೇಟಿ ಮಾಡಿದ ಮಠಾಧೀಶರ ನಿಯೋಗದ ಸದಸ್ಯರು ನಂತರ ಸುದ್ದಿಗಾರರೊಂದಿಗ ಮಾತನಾಡಿ, ಸಿಎಂ ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹೋರಾಟ ತಾರ್ಕಿಕ  ಅಂತ್ಯ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ನಾಗಮೋಹನದಾಸ್ ವರದಿ  ಜಾರಿಗೆ ಶಿಫಾರಸ್ಸು ಮಾಡುವುದು ಸದ್ಯದ  ಅಗತ್ಯ. 900 ವರ್ಷಗಳ ಐತಿಹಾಸಿಕ ಹೋರಾಟಕ್ಕೆ  ಆ ಮೂಲಕ ತಾರ್ಕಿಕ  ಅಂತ್ಯ ಸಿಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದೂ ಮಠಾಧೀಶರು ತಿಳಿಸಿದ್ದಾರೆ. ಆದ್ರೆ ಇಂದು ನಡೆಯುವ ಸಚಿವ ಸಂಪುಟದಲ್ಲಿ ವೀರಶೈವ ಅಥವ ಲಿಂಗಾಯಿತ  ಧರ್ಮನ ಎಂಬ ತೀರ್ಮಾನ ಕ್ಕೆ ತೆರೆಬೀಳಲಿದೆ.