ಬೆಂಗಳೂರು: ವಿಧಾನಸಭೆ: ಶಾಸಕ ಶ್ರೀರಾಮುಲು ಉಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿಸಬೇಕು ಎಂಬ  ಹೇಳಿಕೆಗೆ ಸದನದಲ್ಲಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಹೀಗೆ ರಾಜ್ಯವನ್ನು ಪ್ರತ್ಯೇಕಿಸುವುದು ನಮ್ಮ ಸರ್ಕಾರದ ಗುರಿಯಲ್ಲ. ಬದಲಿಗೆ, ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಗುರಿ ಎಂದರು.

ಮೂರು ದಿನಗಳ ಹಿಂದೆ ಬಜೆಟ್​ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಶಾಸಕ ಶ್ರೀರಾಮುಲು ಅವರು ಉತ್ತರ ಕರ್ನಾಟಕಕ್ಕೆ ಈ ಬಜೆಟ್​ನಲ್ಲಿ ಆಗಿರುವ ಅನ್ಯಾಯದಿಂದ ಬೇಸತ್ತು ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿಕೆ ನೀಡಿದರ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸರಿಯಾದ ಟಾಂಗ್ ಕೊಟ್ಟರು ಶ್ರೀರಾಮುಲು ಅವರಿಗೆ.