ಬೆಂಗಳೂರು: ಯಾವುದೇ ಕಾರಣಕ್ಕೆ ಪ್ರತಿಪಕ್ಷಗಳನ್ನು ಹೆದರಿಸಲು ಪ್ರಧಾನಿ ಮೋದಿ ಹೆಸರು ಹಾಗೂ  ಕೇಂದ್ರ ಸರ್ಕಾರದ ಹೆಸರು ಬಳಕೆ ಮಾಡುವಂತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯಾ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆಂಬುದು ಸುದ್ದಿ ಹರಿದಾಡುತ್ತಿದೆ.

ಪ್ರತಿ ವಿಷಯಕ್ಕೂ ಪ್ರಧಾನಿ ಮೋದಿ, ಅಥವಾ ಕೇಂದ್ರೀಯ ಸಂಸ್ಥೆಗಳ ಹೆಸರನ್ನು ಎಳೆದು ತರುವ ಅಧಿಕಾರ ಪಕ್ಷದ ಯಾರೊಬ್ಬರಿಗೂ ಕೂಡ ಇಲ್ಲ. ಪ್ರತಿಪಕ್ಷಗಳನ್ನು ಹೆದರಿಸಲು ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ಹೆಸರು ಬಳಕೆ ಮಾಡುವಂತ್ತಿಲ್ಲ ಎಂದು ಹೇಳಿರುವುದು ಬಿಜೆಪಿ ನಾಯಕರುಗಳಿಗೆ ಬಾಯಿಕಟ್ಟಿದೆಯಂತೆ ಹೌದ.?