ಚಿತ್ರದುರ್ಗ : ನಿನ್ನೆ ಕಾರ್ಯಕ್ರವೊಂದರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಅಡಿಯಲ್ಲಿ  ಜಗ್ನೇಶ್ ಮೇವಾನಿ ವಿರುದ್ದ ಕೇಸ್ ದಾಖಲಾಗಿದೆ.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ತೆರಳಿ ಕುರ್ಚಿಗಳನ್ನು ತೂರಾಡಿ, 2 ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಎಂದಿದ್ದ ಬಗ್ಗ ಪ್ರಶ್ನೆ ಮಾಡಿ ಎಂದು ಜಿಗ್ನೇಶ್ ಭಾಷಣದಲ್ಲಿ ಹೇಳಿದ್ದರು. ಜಿಗ್ನೇಶ್ ವಿರುದ್ಧ ಈಗ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿಯಲ್ಲಿ ಚಿತ್ರದುರ್ಗ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 153, 188, 117 ಹಾಗೂ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.