ಬೆಂಗಳೂರು: ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಸಲು ಇದ್ದ ಗರಿಷ್ಠ ವಯೋಮಿತಿಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ನಿಯಮಗಳ ಜಾರಿಗೆ ರಾಜ್ಯ ಸರ್ಕಾರವು ಗುರುವಾರ ಅಧಿಕೃತ ಆದೇಶ ಹೊರಡಿಸಿದೆ.

ಪ್ರಸ್ತುತ ಹೊರಡಿಸಲಾದ ತಿದ್ದುಪಡಿ ನಿಯಮಗಳಾನುಸಾರ ಇನ್ಮುಂದೆ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 28 ವರ್ಷದ ಬದಲು 30 ವರ್ಷ, ಎಸ್‌ಸಿ/ಎಸ್‌ಟಿ/ಒಬಿಸಿ ಅಭ್ಯರ್ಥಿಗಳಿಗೆ 30 ವರ್ಷದ ಬದಲು 32 ವರ್ಷ ಗರಿಷ್ಠ ವಯೋಮಿತಿ ಇರುತ್ತದೆ.!