ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ 5000 ಪೊಲೀಸ್ ಕಾನ್ಸ್ ಟೇಬಲ್ ಹಾಗೂ 500 ಪಿಎಸ್ ಐ ಗಳನ್ನು ನೇಮಕ ಮಾಡಲು ಅಧಿಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಿಗೆ ಅಗತ್ಯವಾದ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ 5 ಸಾವಿರ ಕಾನ್ಸ್ ಟೇಬಲ್ ಹಾಗೂ 500 ಪಿಎಸ್ ಐ ಗಳನ್ನು ನೇಮಕಾತಿ ಮಾಡಲು ಅಧಿಸೂಚಿಸಲಾಗಿದೆ ಎಂದು ಹೇಳಿದರು.