ರಾಮನಗರ : ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ ಎಂದು : ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರ್ಜರಿ ಹೇಳಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ 99 ಸಿವಿಲ್ ಕಾನ್ ಸ್ಟೇಬಲ್ ಹುದ್ದೆಗಳು, 135 ಪಿಎಸ್‌ಐ ಹಾಗೂ ನಂತರದ ಹುದ್ದೆಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 69, ವೈರ್ ಲೆಸ್ ವಿಭಾಗದಲ್ಲಿ 9 ಹಾಗೂ ಮಿನಿಸ್ಟರ್ ಸ್ಟಾಪ್ ವಿಭಾಗದಲ್ಲಿ 7 ಹುದ್ದೆ ಖಾಲಿ ಇದೆ ಎಂದು ತಿಳಿಸಿದರು.

ಇನ್ನು ಈ ಪೈಕಿ ಸದ್ಯ 60 ಸಿವಿಲ್ ಪೊಲೀಸ್ ನೇಮಕಾತಿ ನಡೆದಿದ್ದು, ಇವರೆಲ್ಲ ತರಬೇತಿ ಪಡೆಯುತ್ತಿದ್ದಾರೆ. ಇನ್ನು 75 ಹುದ್ದೆಗಳಿಗೆ ಪರೀಕ್ಷೆ ಮುಗಿದಿದೆ. ಡಿಎಆರ್ ನಲ್ಲಿ 50 ಸಿಬ್ಬಂದಿ ನೇಮಕಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.