ಬೆಂಗಳೂರು: ಇಲಾಖೆಯಲ್ಲಿ ಅನೇಕ ಬಾರಿ ಹಿರಿಯ ಅಧಿಕಾರಿಗಳು ಯಾವುದೇ ಕಾಲ ಮೀತಿಯಿಲ್ಲದೇ ವರ್ಗಾವಣೆ ಮಾಡುತ್ತಿದ್ದ ವಿಧಾನಕ್ಕೆ ರಾಜ್ಯ ಸರಕಾರ ಬ್ರೇಕ್ ಹಾಕಿದೆ.

ಯಾವಗ, ಯಾವ ಸಮಯದಲ್ಲಿ ಬೇಕಾದ್ರೂ  ವರ್ಗಾವಣೆ ಮಾಡುತ್ತಾರೆ ಎನ್ನುವ ಭೀತಿಯಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರಕಾರ ಇನ್ಮುಂದೆ ಸಿಸಿಬಿ ಡಿವೈಎಸ್ ಪಿ, ಪೊಲೀಸ್ ಇನ್ಸ್ ಪೆಕ್ಟರ್ ನ್ನು ವರ್ಗಾವಣೆ ಮಾಡುವ ವೇಳೆಯಲ್ಲಿ ಈ ಹಿಂದೆ ಇದ್ದತಂಹ ಮಾನದಂಡಗಳಲ್ಲಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದು, ಈ ಆದೇಶದಲ್ಲಿ ಡಿವೈಎಸ್ ಪಿ, ಪೊಲೀಸ್ ಇನ್ಸ್ ಪೆಕ್ಟರ್ ನ್ನು  ವರ್ಗಾವಣೆಗೆ ನಿರ್ದಿಷ್ಟ ಕಾಲವದಿ ಇಲ್ಲ ಅಂತ ಹೇಳಿದೆ.

ಇದಲ್ಲದೇ ಒಂದೇ ಸ್ಥಳದಲ್ಲಿ ಐದು ವರ್ಷಗಳಿಗು ಮೇಲ್ಪಟ್ಟು ಸೇವೆ ಸಲ್ಲಿಸಬಹುದಾಗಿದೆ ಅಂತ ಹೇಳಲಾಗಿದೆ ಎಂದು ತಿಳಿದುಬಂದಿದೆ.