ಬೆಂಗಳೂರು: ಕಾಸಿಗಾಗಿ ಸುದ್ದಿ ಮಾಧ್ಯಮಗಳು ಸುದ್ದಿಗಳನ್ನು ಪ್ರಕಟಮಾಡಿದ್ದು, ಇಲ್ಲಿ ತನಕ ಸುಮಾರು 80ಕ್ಕೂ ಹೆಚ್ಚು ಪ್ರಕರಣಳು ಬೆಳಕಿಗೆ ಬಂದಿದ್ದು, ಶಂಕಿತ ಪೇಯ್ಡ್ ನ್ಯೂಸ್ ಪ್ರಕರಣಗಳ ಪೈಕಿ ಪತ್ರಿಕೆಗಳಲ್ಲಿ 3 ಪತ್ತೆಯಾಗಿದ್ದು, ಟಿವಿ ವಾಹಿನಿಗಳಲ್ಲಿ 2 ಪ್ರಕರಣಗಳು ಬೆಳಕಿಗೆ ಬಂದಿವೆ. 13 ಕಾಸಿಗಾಗಿ ಸುದ್ದಿಗಳನ್ನು ಜಾಹೀರಾತುಗಳ ರೂಪದಲ್ಲಿ ಪ್ರಕಟವಾಗಿರುವುದು ಕಂಡು ಬೆಳಕಿಗೆ ಅಂತ ಚುನಾವಣಾ ಆಯೋಗದಿಂದ ಮಾಹಿತಿ ಸಿಕ್ಕಿದೆಯಂತೆ

ಇದೇ ವೇಳೆ ಅಭ್ಯರ್ಥಿ ಅಥವಾ ಪಕ್ಷ ಕೇಂದ್ರಿತವಾಗಿ ಸುದ್ದಿ ಮಾಡುವ ಟಿವಿ ಸುದ್ದಿ, ಕಾರ್ಯಕ್ರಮದ ಕ್ಲಿಪ್ಪಿಂಗ್ಸ್ ಹಾಗೂ ಪೇಪರ್ ಕಟ್ಟಿಂಗ್ ಸಮೇತ ದಾಖಲೆ ಸಿದ್ಧ ಪಡಿಸಿ ಅಭ್ಯರ್ಥಿಗೆ ಮತ್ತು ಸುದ್ದಿ, ಜಾಹೀರಾತು ಪ್ರಕಟಿಸಿದ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.