ನವದೆಹಲಿ: ಆನ್ಲೈನ್ ಹಣ ಪಾವತಿ ಅಪ್ಲಿಕೇಷನ್ ಇ-ವ್ಯಾಲೆಟ್ ಪೇಟಿಯಂ ಈಗ ಕ್ಯಾಶ್ ಬ್ಯಾಕ್ ಸಮಸ್ಯೆಯಲ್ಲಿ ಸಿಲುಕಿದೆ.

ಕ್ಯಾಶ್ ಬ್ಯಾಕ್ ಹೆಸರಿನಲ್ಲಿ ಉದ್ಯಮಿ ರಾಜ್ ಕುಮಾರ್ ಸಿಂಗ್ ಎಂಬವರ ಖಾತೆಯಿಂದ ಒಟ್ಟಾರೆ 1,46,694 ರೂ. ಹಣ ವಂಚಿಸಿದ ಆರೋಪದಲ್ಲಿ ಉತ್ತರಪ್ರದೇಶದ ಗಾಜಿಯಾಬಾದ್ ನ ಕವಿನಗರ್ ನಲ್ಲಿ ಪ್ರಕರಣ ದಾಖಲಾಗಿದೆ.

ಪೇಟಿಯಂ ಸ್ಥಾಪಕ, ಸಿಇಒ ವಿಜಯ್ ಶೇಖರ್ ಶರ್ಮ, ಉಪಾಧ್ಯಕ್ಷ ಅಜಯ್ ಶೇಖರ್ ಶರ್ಮ ಸೇರಿ ಇನ್ನು ಕೆಲವರು ಸೇರಿ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿರುವ ಉದ್ಯಮಿ ದೂರು ದಾಖಲಿಸಿದ್ದಾರೆ.