ಜಲಾಲಾಬಾದ್: ಪೂರ್ವ ಅಫ್ಘಾನಿಸ್ತಾನದ ಸರ್ಕಾರಿ ಕಟ್ಟಡವೊಂದನ್ನು ಗುರಿಯಾಗಿರಿಸಿಕೊಂಡು ಶನಿವಾರ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂಗರ್ಹಾರ್ ಪ್ರಾಂತ್ಯದ ಘನಿ ಖೇಲ್ ಜಿಲ್ಲೆಯಲ್ಲಿ ಕೆಲವು ಮಿಲಿಟರಿ ಸೌಲಭ್ಯಗಳನ್ನು ಹೊಂದಿರುವ ಆಡಳಿತ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ರಾಜ್ಯಪಾಲರ ವಕ್ತಾರ ಅತಾವುಲ್ಲಾ ಖೋಗ್ಯಾನಿ ಎಎಫ್ ಪಿಗೆ ತಿಳಿಸಿದ್ದಾರೆ.

‘ಜಿಲ್ಲಾ ಕೇಂದ್ರ ಕಟ್ಟಡದ ಪ್ರವೇಶದ್ವಾರದಲ್ಲಿ ಕಾರ್ ಬಾಂಬ್ ಸ್ಫೋಟಿಸಲಾಗಿದೆ. ದಾಳಿಯ ನಂತರ ಅನೇಕ ಶಸ್ತ್ರಸಜ್ಜಿತ ದಾಳಿಕೋರರು ಕಟ್ಟಡದಳೊಗೆ ನುಗ್ಗಲು ಯತ್ನಿಸಿದರಾದರೂ ಭದ್ರತಾ ಪಡೆಗಳು ಅವರನ್ನು ಹತ್ಯೆ ಗೈದಿವೆ” ಎಂದು ಅವರು ಹೇಳಿದರು.