ಬೆಂಗಳೂರು: 2018-19 ಸಾಲಿನಿಂದ ಪದವಿಪೂರ್ವ ಪಿಯುಸಿ ವಿದ್ಯಾರ್ಥಿಗಳಿಗೆ ಕಾಲೇಜುಗಳ ಶುಲ್ಕವನ್ನು ಶೇ. 60 ಕ್ಕೆ ಹೆಚ್ಚಳ ಮಾಡಲಾಗಿದೆ.

ಶಿಕ್ಷಣ ಇಲಾಖೆಯ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಶುಲ್ಕವನ್ನು ಶೇ. 30 ರಿಂದ ಶೇ. 60 ರಷ್ಟು ಹೆಚ್ಚಿಸಲಾಗುತ್ತದೆ.

ಶಿಕ್ಷಣ ಸಂಸ್ಥೆಗಳಿಂದ ಶುಲ್ಕ ಹೆಚ್ಚಳದ ಬಗ್ಗೆ ಒತ್ತಾಯ ಬಂದ ಹಿನ್ನೆಲೆಯಲ್ಲಿ, ಪ್ರವೇಶ ಶುಲ್ಕ, ಅಂಕ ಪಟ್ಟಿ, ಮರು ಮೌಲ್ಯಮಾಪನ, ನೋಂದಣಿ, ವರ್ಗಾವಣೆ ಪತ್ರ ಮೊದಲಾದವು ಸೇರಿದಂತೆ ಸುಮಾರು 46 ಶುಲ್ಕವನ್ನು ಪರಿಷ್ಕರಿಸಲಾಗಿದೆಯಂತೆ.