ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ಮಾಹಿತಿ ನೀಡಿದ್ದು, ಪದವಿಪೂರ್ವ ಕಾಲೇಜು ಬೋಧಕರ‌ ಆಯ್ಕೆ ಬಗ್ಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಮತ್ತು ಕೌನ್ಸಲಿಂಗ್ ನಡೆದು ಸ್ಥಳ ನಿಗದಿಪಡಿಸಲಾಗಿದೆ.

ಕೋವಿಡ್ ಭೀತಿ ಹಿನ್ನಲೆ ಇನ್ನೂ ಕಾಲೇಜುಗಳು ಆರಂಭವಾಗದೆ ಇರುವುದರಿಂದ ಬೋಧಕರಿಗೆ ವರದಿ ಮಾಡಿಕೊಳ್ಳುವುದಕ್ಕೆ ತೊಂದರೆ ಆಗುತ್ತಿದೆ. ಈ ಹಿಂದೆ ಇದ್ದ ಒಂದು ವರ್ಷದೊಳಗೆ ನೇಮಕಾತಿ ಅವಧಿಯ ಊರ್ಜಿತ್ವವನ್ನು, ನೇಮಕಾತಿ ಆಗುವವರೆಗೆ ಮುಂದುವರಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.