ಬೆಂಗಳೂರು: ಪಿಎಫ್ ಅರ್ಜಿ ಸಲ್ಲಿಸುವಾಗ ಯಾವ ಅರ್ಜಿ ಭರ್ತಿ ಮಾಡಬೇಕು ಹೀಗೆ ಹಲವಾರು ವಿಚಾರಗಳು ಕಾಡುತ್ತವೆ ಅಲ್ಲವೆ ಹಾಗಾದರೆ ಈ ಕೆಲವೊಂದು ಮಾಹಿತಿ ನಿಮ್ಮ ಬಳಿ ಇರಲಿ

3 ತಿಂಗಳಿಗಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸಿ, ಕಂಪನಿಯಿಂದ ನಿರ್ಗಮಿಸಿದ್ದರೆ 61 ದಿನ ಆಗಿದ್ದರೆ ಫಾರ್ಮ್ 19 ಮತ್ತು10ಸಿ ಅರ್ಜಿ ಭರ್ತಿ ಮಾಡಿ ಸಂಪೂರ್ಣ ಹಣ ಪಡೆಯಿರಿ.

ಅಡ್ವಾನ್ಸ್ ಪಿಎಫ್ ಹಣ ತೆಗೆಯಲು ಫಾರ್ಮ್ 31 ಸಲ್ಲಿಸಿ.

ಪ್ಯಾನ್ ಇಲ್ಲದಿದ್ದರೆ ಶೇ.34ರಷ್ಟು, ಇದ್ದರೆ ಶೇ.10ರಷ್ಟು ತೆರಿಗೆ ವಿಧಿಸಲಾಗುತ್ತದೆ. ಫಾರ್ಮ್ 15ಜಿ ಸಲ್ಲಿಸಿದಲ್ಲಿ ಶೇ.10ರಷ್ಟು ತೆರಿಗೆಯನ್ನೂ ವಿಧಿಸಲಾಗುವುದಿಲ್ಲ.

ಪಿಎಫ್ ಖಾತೆಯಲ್ಲಿ 50,000ಕ್ಕಿಂತ ಕಡಿಮೆ ಹಣವಿದ್ದರೆ ತೆರಿಗೆ ಅನ್ವಯವಾಗುವುದಿಲ್ಲ.