ಬೆಂಗಳೂರು: ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ (SJICSR) 6 ವರ್ಷ ನಡೆಸಿದ ಸುದೀರ್ಘ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಸಂಗತಿ ಗೊತ್ತಾಗಿದೆ.!

ಪಾಲಿಷ್ ಮಾಡಿರುವ ಅಕ್ಕಿಯನ್ನು ಸೇವಿಸುವುದು ನವಜಾತ ಶಿಶುಗಳಲ್ಲಿ ವಿಟಮಿನ್ B1 ಕೊರತೆಗೆ ಕಾರಣವಾಗಲಿದೆ. ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ ಎಂಬ ಆಘಾತಕಾರಿ ಸಂಗತಿಯನ್ನು ಈ ಅಧ್ಯಯನ ತಿಳಿಸಿದೆ.

ಜರ್ನಲ್ ಆಫ್ ಆರ್ಕೈವ್ಸ್ ಆಫ್ ಡಿಸೀಸಸ್ ಇನ್ ಚೈಲ್ಡ್‌ಹುಡ್ ನಿಯತಕಾಲಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.!