ಬೆಂಗಳೂರು:  ಪಾನ್ ಕಾರ್ಡ್ ಕಳೆದು ಹೋದ್ರೆ ಚಿಂತೆ ಬೇಡ ನಕಲು ಪಾನ್ ಕಾರ್ಡ್ ಪಡೆಯಲು https://www.tin-nsdl.com ವೆಬ್ ಸೈಟ್ ಗೆ ಹೋಗಬೇಕು.

ಅಲ್ಲಿ ಮುಖಪುಟದಲ್ಲಿ ಮರು ಮುದ್ರಣ ಆಯ್ಕೆಯನ್ನು ಕ್ಲಿಕ್ ಮಾಡಿ. ಮುಖಪುಟದಲ್ಲಿ ಈ ಲಿಂಕ್ ಸಿಗದಿದ್ದಲ್ಲಿ ಸರ್ವೀಸ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಬಳಿಕ Reprint of PAN Card ಆಯ್ಕೆ ಸಿಗಲಿದೆ.

ಇಲ್ಲಿ ಕ್ಲಿಕ್ಕಿಸಿದ ನಂತರ ಹೊಸ ವೆಬ್‌ ಪುಟ ತೆರೆಯುತ್ತದೆ. ಅಲ್ಲಿ ಪಾನ್ ಕಾರ್ಡ್, ಆಧಾರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಬೇಕು. ಒಟಿಪಿಗಾಗಿ ಇಮೇಲ್ ಅಥವಾ ಮೊಬೈಲ್ ನಂಬರ್ ನೀಡಬೇಕು. ಆಗ ಮತ್ತೆ ನಿಮ್ಮ ಪಾನ್ ಕಾರ್ಡ್ ರೆಡಿ ಆಗುತ್ತದೆ.