ನವದೆಹಲಿ: ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಜೋಡಣೆ ಹಾಗೂ ಹಲವು ತೆರಿಗೆ ಸಂಬಂಧಿತ ಗಡುವುಗಳನ್ನು ಕೇಂದ್ರ ಸರ್ಕಾರ ಮುಂದೂಡಿದೆ.

ಜೂನ್ 30ರವರೆಗೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಜೋಡಣೆಗೆ ಕೊನೆಯ ವಾಗಿತ್ತು. ಸರಕಾರ 2021ರ ಮಾರ್ಚ್ 31 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

2018-19 ನೇ ಸಾಲಿನ ತಡವಾಗಿ ಮತ್ತು ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲುಉ ಇದ್ದ ಗಡುವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ 2019-20 ನೇ ಸಾಲಿನ ತೆರಿಗೆ ವಿನಾಯಿತಿ ಪಡೆಯಲು ಮಾಡುವ ಹೂಡಿಕೆ ಮತ್ತು ಖರ್ಚುಗಳಿಗೆ ಇದ್ದ ಗಡುವನ್ನು ಜೂನ್ 30 ರಿಂದ ಜುಲೈ 31 ರವರೆಗೆ ವಿಸ್ತರಿಸಲಾಗಿದೆ.