ಬೆಂಗಳೂರು: ಭ್ರಷ್ಟಾಚಾರ, ಬೊಕ್ಕಸ ಲೂಟಿ, ಪರ್ಸೆಂಟೇಜ್ ವ್ಯವಹಾರದ ವಿಷಯಗಳ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರ ಮಧ್ಯದ ವಾಕ್ಸಮರ ಮುಂದುವರೆದಿದ್ದು, ಕುಮಾರಸ್ವಾಮಿಯವರು ಯಡಿಯೂರಪ್ಪನವರನ್ನು ಪರ್ಸಂಟೇಜ್‌ ಜನಕ ಅಂತ ಹೇಳಿದ್ದಾರೆ.

ಯಡಿಯೂರಪ್ಪ ಅವರು ಅಪ್ಪ–ಮಕ್ಕಳು ಲೂಟಿಕೋರರು ಎಂದು ಆರೋಪ ಮಾಡಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಮೊದಲು ಕೊಡಲಿ. ನಮ್ಮ ಸಚಿವರು ಶೇ 8ರಿಂದ 10ರಷ್ಟು ಕಮಿಷನ್‌ ಕೇಳುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಪರ್ಸೆಂಟೇಜ್‌ ಸಿಸ್ಟಮ್‌ ತಂದ ಪುಣ್ಯಾತ್ಮ ಅವರೇ ಎಂದರು.

ಕಾಂಗ್ರೆಸ್‌ ಪಕ್ಷ ಸುದೀರ್ಘ ಆಡಳಿತದಲ್ಲಿದ್ದರೂ ಆ ಪಕ್ಷದ ಮುಖಂಡರಿಗೆ ಈ ಆಲೋಚನೆ ಬಂದಿರಲಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೂಡಲೇ ಈ ವ್ಯವಸ್ಥೆ ಜಾರಿಗೆ ತಂದರು. ಪರ್ಸೆಂಟೇಜ್‌ ವ್ಯವಸ್ಥೆಯ ಜನಕ ಎಂದು ಕುಮಾರಸ್ವಾಮಿ ಹೇಳಿದ್ದಾರೆ.