ಬೆಂಗಳೂರು : ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಐಟಿ ಇಲಾಖೆ ಕಿರುಕುಳದಿಂದಲೇ ಎಂದು ಕುಟುಂಬಸ್ಥರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ರಮೇಶ್ ಅವರ ತಂದೆ, ತಾಯಿ, ಪತ್ನಿ , ಸಹೋದರಿ ಲಕ್ಷ್ಮೀದೇವಿ ಅವರು ರಮೇಶ್ ಆತ್ಮಹತ್ಯೆಗೆ ಐಟಿ ಕಿರುಕುಳವೇ ಕಾರಣ. ಐಟಿ ಅಧಿಕಾರಿಗಳು ರಮೇಶ್ ರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಅವರಿಗೆ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರ ಮುಂದೆ ಸಂಬಂಧಿಕರು ಹೇಳಿಕೆಕೊಂಡಿದ್ದಾರೆ.

ರಮೇಶ್ ಅವರು ಕಳೆದ ಎಂಟು ವರ್ಷಗಳಿಂದ ಪರಮೇಶ್ವರ್ ಅವರ ಪಿಎ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ರಮೇಶ್ ಅವರ ಅಂತ್ಯಕ್ರಿಯೆ ನಾಳೆ ರಾಮನಗರ ಜಿಲ್ಲೆಯ ಮೇಳೆಹಳ್ಳಿಯಲ್ಲಿ ನೆರವೇರಲಿದೆ.