ತುಮಕೂರು; ನಾಡು ಬಂದೂಕಿನಿ0ದ ಗುಂಡು ಹಾರಿಸುವುದು ಹೇಗೆ ಎಂದು ಹೆಂಡತಿಗೆ ತೋರಿಸಿಕೊಡುವಾಗ ಆಕಸ್ಮಿಕವಾಗಿ ಗುಂಡು ಹಾರಿ ಹೆಂಡತಿ ಸಾವನ್ನಪ್ಪಿದ್ದಾರೆ . ಈ ಘಟನೆಯು ತಾಲ್ಲೂಕಿನ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಡಿ.ಕೊರಟಗೆರೆ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಶಾರದಾ (28) ಮೃತಪಟ್ಟದ್ದಾರೆ

ಕಳೆದ 13 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಕೃಷ್ಣಪ್ಪ ಹಾಗೂ ಶಾರದಾ ದಂಪತಿ ಅನ್ಯೋನ್ಯವಾಗಿಯೇ ಜೀವನ ಸಾಗಿಸುತ್ತಿದ್ದರು. ಕೃಷ್ಣಪ್ಪ ಅಡಿಕೆ ಕೀಳುವ ಕೂಲಿ ಕೆಲಸ ಮಾಡಿಕೊಂಡಿದ್ದ. ಹೆಂಡತಿ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಇಬ್ಬರು ಗಂಡು ಮಕ್ಕಳೊಂದಿಗೆ ಸಂತೋಷದಿ0ದಲೇ ಜೀವನ ಸಾಗಿಸುತ್ತಿದ್ದರು. ಕಳೆದ ರಾತ್ರಿ ನಾಡ ಬಂದೂಕಿನಿ0ದ ಪ್ರಾಣಿಗಳನ್ನು ಹೇಗೆ ಬೇಟೆಯಾಡುವುದು ಎಂದು ಹೆಂಡತಿಗೆ ತೋರಿಸಿಕೊಡುವಾಗ ಆಕಸ್ಮಿಕವಾಗಿ ಗುಂಡು ತಲೆಗೆ ಹಾರಿ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ಕೂಡಲೇ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಕನ್ನಿಕಾ ಸೆಕ್ರಿವಾಲಾ , ಹೆಬ್ಬೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ದೇವಿಕಾ ದೇವಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೃಷ್ಣಪ್ಪನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಅನುಮಾನ ಕೂಲಿ ಕೆಲಸ ಮಾಡುವವನಿಗೆ ನಾಡ ಬಂದೂಕು ಹೇಗೆ ಸಿಕ್ಕಿತು , ಯಾರು ಕೊಟ್ಟಿದ್ದಾರೆ , ಉದ್ದೇಶ ಪೂರ್ವಕವಾಗಿಯೇ ತರಬೇತಿ ನೆಪದಲ್ಲಿ ಹತ್ಯೆ ಮಾಡಿದ್ದಾನೋ ಅಥವಾ ಬೇಕಂತಲೇ ಕೊಲೆ ಮಾಡಿದ್ದಾನೋ ಎಂಬ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದೆ.

ಮೃತಪಟ್ಟ ಶಾರದಾಳ ಸಹೋದರ ತನ್ನ ಅಕ್ಕನಿಗೆ ಭಾವ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಈ ಸಂಬ0ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಈ ಘಟನೆ ಆಕಸ್ಮಿಕವಾಗಿದ್ದು , ಬೇಕಂತಲೇ ನಾನು ಮಾಡಿಲ್ಲ ಅಂತಾ ಪತಿ ಕೃಷ್ಣಪ್ಪ ತಿಳಿಸಿದ್ದಾರೆ. ಈ ಘಟನೆ ಪೊಲೀಸರಿಗೆ ತೀವ್ರ ತಲೆನೋವಾಗಿದ್ದು ಸ್ಥಳಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ಚನ್ನೇಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.