ಬೆಂಗಳೂರು: ಸದ್ಯ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಪಡಿತರ ಚೀಟಿದಾರರಿಗೆ ಒಟ್ಟಿಗೆ ಎರಡು ತಿಂಗಳ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದೇ ವೇಳೆ ಮತ್ತೊಂದು ಸಿಹಿ ಸುದ್ದಿ ಏನಪ್ಪ ಅಂದ್ರೆ.?

ಏಪ್ರಿಲ್ 20ರ ನಂತರ ಕೇಂದ್ರ ಸರ್ಕಾರ ನೀಡಲಿರುವ ಮೂರು ತಿಂಗಳ ಪಡಿತರ ವಿತರಣೆ ಮಾಡಲಾಗುವುದು. ಈಗಾಗಲೇ ರಾಜ್ಯಾದ್ಯಂತ ಪಡಿತರ ಚೀಟಿದಾರರಿಗೆ ಎರಡು ತಿಂಗಳ ಪಡಿತರ ವಿತರಣೆ ಕಾರ್ಯ ಮುಂದುವರೆದಿದೆ. ಏಪ್ರಿಲ್ 20ರ ನಂತರ ಕೇಂದ್ರದ ಮೂರು ತಿಂಗಳ ಪಡಿತರ ವಿತರಣೆ ಆಗಲಿದೆ ಎಂದು ಆಹಾರ ಖಾತೆ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.