ಬೆಂಗಳೂರು:  ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಉಮೇಶ್ ಜಾಧವ್ ಅವರಿಗೆ ಕಲಬುರಗಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದೆ.

ಆದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ಕೆ.ಆರ್​. ರಮೇಶ್​ ನೋಟಿಸ್​ ಜಾರಿ ಮಾಡಿರುವುದು ಟಿಕೆಟ್ ಸಿಕ್ಕ ಖುಷಿಗೆ ತಣ್ಣೀರು ಎರಚಿದಂತಾಗಿದೆ. ಕಾಂಗ್ರೆಸ್​ನಿಂದ ಆಯ್ಕೆಯಾಗಿ ಶಾಸಕರಾಗಿದ್ದ ಜಾಧವ್​, ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಪಾಳಯಕ್ಕೆ ಲಗ್ಗೆ ಇಟ್ಟು ಲೋಕಸಭಾ ಸ್ಪರ್ಧಿಯಾಗಿದ್ದಾರೆ.

ಒಟ್ಟಿನಲ್ಲಿ ಉಮೇಶ್ ಜಾಧವ್ ಅವರಿಗೆ ಸಧ್ಯಕ್ಕೆ ಇಕ್ಕಟ್ಟಿನ ಪರಿಸ್ಥಿತಿ.