ಚಿತ್ರದುರ್ಗ: ನಿಮಗೆ ನೀಡಿರುವ ಹುದ್ದೆ ಚಿಕ್ಕದಾದರು ಅದರ ಪರಿಣಾಮ ಮಾತ್ರ ಅಗಾಧವಾಗಿದೆ, ಇದರ ಒಳ ಮರ್ಮವನ್ನು ಅರಿಯುವುದರ ಮೂಲಕ ಚನ್ನಾಗಿ ಕೆಲಸ ಮಾಡುವಂತೆ ನೂತನ ಪದಾಧಿಕಾರಿಗಳಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಕರೆ ನೀಡಿದರು.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ, ಚಿತ್ರದುರ್ಗ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ವತಿಯಿಂದ, ಚಿತ್ರದುರ್ಗ ಮತ್ತು ಮೊಳಕಾಲ್ಮೂರು ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲಾ ಮಾಧ್ಯಮ ಕಾರ್ಯದರ್ಶಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಆದೇಶ ಪತ್ರವನ್ನು ವಿತರಣೆ ಮಾಡಿ ಮಾತನಾಡಿದರು.

ಕೆಲವೊಂದು ಜನತೆ ಈಗ ನೀಡಿರುವ ಆದೇಶ ಪತ್ರವನ್ನು ಮನೆಯಲ್ಲಿ ಇಟ್ಟು ಬೀಡುತ್ತಾರೆ ಕೆಲಸ ಮಾಡುವುದಿಲ್ಲ ಆದರೆ ಕಾಂಗ್ರೇಸ್ ಪಕ್ಷ ನಿಮನ್ನು ಗುರುತಿಸಿ ಜಬಾಬ್ದಾರಿ ನೀಡಿದೆ ಎಂದರೆ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ ಇದರಿಂದ ನಮಗೆ ಎನು ಉಪಯೋಗ ಇಲ್ಲ ನಾವು ಏಕೆ ಕೆಲಸ ಮಾಡಬೇಕೆಂದು ಉದಾಸೀನ ಮಾಡಬೇಡಿ ಇದರಿಂದ ಮುಂದೆ ನಿಮಗೆ ಸಿಗಬಹುದಾದ ದೊಡ್ಡದಾದ ಹುದ್ದೆ ಕೈತಪ್ಪುವ ಸಾಧ್ಯತೆ ಇದೆ ಎಂದು ನೂತನ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಪಕ್ಷ ಯಾರಿಗೆ ಟೀಕೇಟ್ ನೀಡಿದರು ಸಹಾ ಅವರ ಗೆಲುವಿಗೆ ಎಲ್ಲರು ಸಹಾ ಮುಂದಾಗಬೇಕಿದೆ, ಅದರಲ್ಲು ಪ್ರಚಾರ ಸಮಿತಿಯ ಪಾತ್ರ ಅತಿ ಮುಖ್ಯವಾಗಿದೆ, ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸುವುದರ ಮೂಲಕ ಮುಂದಿನ ಬಾರಿಯೂ ಸಹಾ ಕಾಂಗ್ರೇಸ್ ನೇತೃತ್ವದ ಸರ್ಕಾರ ಅಧಿಕಾರ ಮಾಡುವಂತೆ ಮಾಡಬೇಕಿದೆ ಇದರ ಹೊಣೆಗಾರಿಕೆ ನಿಮ್ಮ ಮೇಲಿದೆ. ಇದು ಒಂದು ರೀತಿಯಲ್ಲಿ ಪರೀಕ್ಷೆ ಇದ್ದಂತೆ ಇಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಪಾಸಾದರೆ ಮುಂದೆ ಪಕ್ಷದಿಂದ ಉತ್ತಮವಾದ ಅವಕಾಶಗಳು ಸಿಗುತ್ತದೆ ಎಂದು ಗೋಪಾಲಕೃಷ್ಣ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದಾವಣಗೆರೆ ಸಮಿತಿ ಅಧ್ಯಕ್ಷ ಸುಭಾಷ್, ಮುಖಂಡರಾದ ಸೇತುರಾಂ, ತಿಪ್ಪೇಸ್ವಾಮಿ, ಗೀರೀಶ್,ಎನ್,ಡಿ.ಕುಮಾರ್, ಸುಬ್ಬಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.