ಬೆಂಗಳೂರು: ಪಕ್ಷದಲ್ಲಿ ಭಿನ್ನಮತ ಿದೆ ಆದರೆ ಆದಷ್ಟು ಬೇಗೆನೆ ಬಗೆಹರಿಸಲಾಗುತ್ತೆ ಎಂದು ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಎಂ.ಬಿ. ಪಾಟೀಲ್ ರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಆದರೆ, ಯಾವ ಕಾರಣಕ್ಕಾಗಿ ದಿನೇಶ್ ಗುಂಡೂರಾವ್ ಮತ್ತು ಎಂ.ಬಿ.ಪಾಟೀಲ್ ದೆಹಲಿಗೆ ಹೋಗಿದ್ದಾರೋ ಅಥವಾ ಹೈಕಮಾಂಡ್ ಕರೆಸಿಕೊಂಡಿದ್ಯೋ ಗೊತ್ತಿಲ್ಲ ಎಂದರು. ಪ್ರತಿಯೊಂದು ಸಲ ಸಂಪುಟ ವಿಸ್ತರಣೆಮಾಡುವ ಸಂದರ್ಭದಲ್ಲಿ ಈ ರೀತಿ ಗೊಂದಲ ಆಗುವುದು ಸಹಜ ಆದರೆ ಶೀಘ್ರದಲ್ಲಿಯೇ ಎಲ್ಲವೂ ತಿಳಿಯಾಗಲಿದೆ ಎಂದರು.