ಹುಬ್ಬಳ್ಳಿ : ಬಿ.ಎಸ್ ಯಡಿಯೂರಪ್ಪ ಅವರನ್ನು ಕೆಜೆಪಿ ಪಕ್ಷದಿಂದ ಉಚ್ಚಾಟಿಸಿದರೆ 10 ಕೋಟಿ ನೀಡುತ್ತೇನೆ ಎಂದು ಹೇಳಿದವರು ಅಂದಿನ ಸಿಎಂ ಜಗದೀಶ್ ಶೆಟ್ಟರ್  ಆಮಿಷ ಒಡ್ಡಿದ್ದರು ಎಂದು ಕೆಜೆಪಿ ರಾಷ್ಟ್ರೀಯ ಅಧ್ಯಕ್ಷ ಪದ್ಮನಾಭ ಪ್ರಸನ್ನ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಗೃಹ ಕಚೇರಿಗೆ ಕರೆಸಿಕೊಂಡು ನನಗೆ ಆಮೀಷ ಒಡ್ಡಿದ್ದರು. ಪತ್ರಕರ್ತ ಇಂದ್ರಜಿತ್ ಲಂಕೇಶ್ ಹಾಗೂ ಚಂದ್ರಚೂಡ್ ನನಗೆ ಹಣ ತಲುಪಿಸಲು ಬಂದಿದ್ದರು. ಈ ಕುರಿತು ಸಿಸಿಟಿವಿ ವಿಡಿಯೋ ದಾಖಲೆ ನನ್ನ ಬಳಿ ಇದೆ ಎಂದು ಹೇಳಿದ್ರು.

ಮುಂದಿನ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಎಂದು ಹೇಳಿದ್ದಾರೆ.