ಬೆಂಗಳೂರು: ಹಿಂದುತ್ವವನ್ನು ಮುಖ್ಯವಾಗಿಟ್ಟುಕೊಂಡು  ಬಿಜೆಪಿಮಾಡಿದ ಅಪಪ್ರಚಾರಕ್ಕೆ ಸರಿಯಾಗಿ ಕೌಂಟರ್ ಕೊಡಲು ಸಾಧ್ಯವಾಗದ ಕಾರಣ ನಾವು ವಿಧಾನಸಭಾ ಚುನಾವಣೆಯಲ್ಲಿ ಸೋಲುವುದಕ್ಕೆ ಕಾರಣವಾಯಿತಂತೆ.

ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ  ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಬಿಜೆಪಿಯವರ ಸುಳ್ಳು ಪ್ರಚಾರವನ್ನು ಹತ್ತಿಕ್ಕುವಲ್ಲಿ ನಾವು ವಿಫಲವಾದೆವು. ಇದರಿಂದಾಗಿ ಕರಾವಳಿಯಲ್ಲಿ ಕಳೆದ ಬಾರಿ 19ರಲ್ಲಿ ನಾವು 13 ಕ್ಷೇತ್ರಗಳಲ್ಲಿ ಜಯಗಳಿಸಿದ್ದೇವು. ಆದರೆ ಈ ಬಾರಿ ಕೇವಲ 3 ಸ್ಥಾನ ಗೆಲುವು ಸಾಧಿಸಬೇಕಾಯಿತು. ಹಾಗಾಗಿ ಪಕ್ಷ ಸೋಲು ಅನುಭವಿಸಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದರು.