ತುಮಕೂರು:ಪಾವಗಡ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಕೆಲವು ಮತಗಳಿಂದ ಗೆದ್ದು, ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಕೆಲಸ ಮಾಡುತ್ತಿರುವ ವೆಂಕಟರಮಣಪ್ಪ, ಆಂಧ್ರಪ್ರದೇಶ ಕಾಂಗ್ರೆಸ್ ಕೌನ್ಸಿಲ್ ರಘುವೀರ್ ರೆಡ್ಡಿ  ಸೇರಿಕೊಂಡು ಅಧಿಕಾರಿಗಳಿಗೆ ಕ್ಲಾಸ್ ನೀಡಿದ್ದರೆ.

ಪಾವಗಡ ತಾ.ಪಂ ಸಭೆಯಲ್ಲಿ ಎಪಿಸಿಸಿ ಅಧ್ಯಕ್ಷ( ಆಂದ್ರಪ್ರದೇಶ ಕಾಂಗ್ರೆಸ್ ಕೌನ್ಸಿಲ್) ರಘುವೀರ ರೆಡ್ಡಿಯನ್ನು ಆಹ್ವಾನ ಮಾಡಿ, ತೆಲುಗು ಭಾಷೆಯಲ್ಲಿ ಚರ್ಚೆ ನಡೆಸಿ, ಕರ್ನಾಟಕದ ಅಧಿಕಾರಿಗಳ ಜೊತೆ ಸಭೆಯಲ್ಲಿ ಮಾತನಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಸರ್ಕಾರ ಸಭೆಗಳಿಗೆ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಆಹ್ವಾನಿತ ಮಾಧ್ಯಮದವರನ್ನು ಹೊರತು ಪಡಿಸಿ ಬೇರೆಯವರಿಗೆ ಅವಕಾಶವಿರುವುದಿಲ್ಲ, ಆದರೆ ವೆಂಕಟರಮಣ್ಣಪ್ಪ ತಾ.ಪಂಚಾಯತಿ ಸಭೆಗೆ ಪಕ್ಕದ ರಾಜ್ಯದ ರಘುವೀರ ರೆಡ್ಡಿಯನ್ನು ಆಹ್ವಾನ ಮಾಡಿ, ಅಧಿಕಾರಿಗಳಿಗೆ ಮಾರ್ಗದರ್ಶ ನೀಡುವುದು, ಅದರಲ್ಲೂ ತೆಲುಗು ಭಾಷೆಯಲ್ಲಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಚರ್ಚೆಗೆ ಗ್ರಾಸವಾಗಿದೆ.