ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ನೇಮಕಕ್ಕೆ ಮುಂದಾಗಿದೆ. ಬ್ಯಾಂಕ್ 535 ಆಫೀಸರ್ ಹುದ್ದೆ ನೇಮಕ ಮಾಡಿಕೊಳ್ಳಲಿದೆ.

ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ಪ್ರಾರಂಭವಾಗಿದೆ. ಸೆಪ್ಟೆಂಬರ್ 29 ರವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಆನ್‌ಲೈನ್ ಪರೀಕ್ಷೆಯ ಆಧಾರದ ಮೇಲೆ ಪಿಎನ್‌ಬಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಒಟ್ಟು 200 ಅಂಕಗಳ ಪರೀಕ್ಷೆಯಿರಲಿದೆ. ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು 2 ಗಂಟೆಗಳ ಅವಕಾಶ ಸಿಗ್ತಿದೆ. ಲಿಖಿತ ಪರೀಕ್ಷೆ ನಂತ್ರ ಸಂದರ್ಶನ ನಡೆಯಲಿದೆ. ಈ ಕೆಳಗಿನ ಹುದ್ದೆಗಳಿಗೆ ನೇಮಕ ನಡೆಯಲಿದೆ.

ವ್ಯಸ್ಥಾಪಕ (ರಿಸ್ಕ್): 160 ಪೋಸ್ಟ್

ವ್ಯವಸ್ಥಾಪಕ (ಕ್ರೆಡಿಟ್): 200 ಪೋಸ್ಟ್‌

ವ್ಯವಸ್ಥಾಪಕ (ಖಜಾನೆ): 30 ಹುದ್ದೆಗಳು

ಮ್ಯಾನೇಜರ್ (ಕಾನೂನು) : 25 ಹುದ್ದೆಗಳು

ಮ್ಯಾಂಗರ್ (ವಾಸ್ತುಶಿಲ್ಪಿ): 2 ಪೋಸ್ಟ್

ಮ್ಯಾನೇಜರ್ (ಸಿವಿಲ್): 8 ಹುದ್ದೆಗಳು

ವ್ಯವಸ್ಥಾಪಕ (ಆರ್ಥಿಕ): 10 ಹುದ್ದೆಗಳು

ಮ್ಯಾನೇಜರ್ (ಎಚ್‌ಆರ್): 10 ಪೋಸ್ಟ್

ಹಿರಿಯ ವ್ಯವಸ್ಥಾಪಕ (ರಿಸ್ಕ್) : 40 ಹುದ್ದೆಗಳು

ಹಿರಿಯ ವ್ಯವಸ್ಥಾಪಕ (ಕ್ರೆಡಿಟ್): 50 ಹುದ್ದೆಗಳು

ಸಾಮಾನ್ಯ ಅಭ್ಯರ್ಥಿಗಳು, ಅರ್ಜಿ ಸಲ್ಲಿಸುವ ವೇಳೆ 850 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಎಸ್ಸಿ,ಎಸ್ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳು 175 ರೂಪಾಯಿ ಪಾವತಿಸಬೇಕು.