ದಾವಣಗೆರೆ : ವೀರಶೈವ ಪಂಚಮಸಾಲಿ ಗುರುಪೀಠಕ್ಕೆ ನೂತನ ಸ್ವಾಮೀಜಿಯಾಗಿ ಶ್ವಾಸ ಗುರು ವಚನಾನಂದ ಸ್ವಾಮೀಜಿ ಆಯ್ಕೆಯಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹಗನವಾಡಿ ಗ್ರಾಮದ ಬಳಿ ವೀರಶೈವ ಪಂಚಮಸಾಲಿ ಜಗದ್ಗುರು ಪೀಠದ ನೂತನ ಸ್ವಾಮೀಜಿಯಾಗಿ ಶ್ವಾಸ ಗುರು ವಚನಾನಂದ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಇದೇ 20 ರಂದು ವಚನಾನಂದ ಸ್ವಾಮೀಜಿ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ.