ಅಹ್ಮದಾಬಾದ್: ನೌಕಾಯಾನ ಖಾತೆಯನ್ನು ಶೀಘ್ರದಲ್ಲಿಯೇ ಬಂದರು, ನೌಕಾಯಾನ ಮತ್ತು ಜಲಸಾರಿಗೆ ಸಚಿವಾಲಯ ಎಂದು ಪುನರ್‌ನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೂರತ್‌ನ ಹಝಾರಿಯಾದಿಂದ ಭಾವಾನಗರದ ಘೋ ಯಾವರೆಗೆ ಹಡಗು ಸೇವೆ- ರೋ ಪಾಕ್ಸ್ ಸೇವೆಯನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು. ದೇಶದ ಸಮುದ್ರ ಮಾರ್ಗಗಳನ್ನು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಳಕೆ ಮಾಡಲಾಗುತ್ತದೆ. ಸರಕಾರದ ಇಂಥ ಪ್ರಯತ್ನಕ್ಕೆ ಇಂಬು ಕೊಡಲು ನೌಕಾಯಾನ ಸಚಿವಾಲಯವನ್ನು ಶೀಘ್ರ ದಲ್ಲಿಯೇ ಬಂದರು, ನೌಕಾಯಾನ ಮತ್ತು ಜಲ ಸಾರಿಗೆ ಸಚಿವಾಲಯ ಎಂದು ಪುನರ್ ನಾಮ ಕರಣ ಮಾಡಲಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನೌಕಾಯಾನ ಸಚಿವಾಲಯವೇ ಬಂದರು ಮತ್ತು ಜಲಸಾರಿಗೆಯನ್ನು ನೋಡಿ?ಕೊಳ್ಳ್ತುತ್ತದೆ. ಭಾರತದಲ್ಲಿ ನೌಕಾಯಾನ ಸಚಿವಾ?ಲಯಕ್ಕೆ ಬಂದರು ಮತ್ತು ಜಲಸಾರಿಗೆಗೆ ಸಂಬಂಧಿಸಿದಂತೆ ಹೆಚ್ಚಿನ ಕೆಲಸದ ಒತ್ತಡ ಇರುವುದಿಲ್ಲ. ಹೆಸರಿನಲ್ಲಿ ಸ್ಪಷ್ಟತೆ ಇದ್ದರೆ ಕೆಲಸದಲ್ಲಿಯೂ ನಿಖರತೆ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ರೋ ಪಾಕ್ಸ್ ಸೇವೆಯಿಂದಾಗಿ ಎರಡೂ ಸ್ಥಳಗಳ ನಡುವೆ ಇರುವ ೩೭೫ ಕಿಮೀ ಪ್ರಯಾಣದ ದೂರವನ್ನು ಸಮುದ್ರ ಮಾರ್ಗದ ಮೂಲಕ ೯೦ ಕಿಮೀ ದೂರಕ್ಕೆ ಇಳಿದಂತಾಗುತ್ತದೆ. ಮತ್ತು ೨ ಗಂಟೆಗಳಿಗೆ ತಗ್ಗಿದಂತಾಗುತ್ತದೆ.