ಬೆಂಗಳೂರು: ಕೇಂದ್ರ ಸರಕಾರ ಐನೂರು ಹಾಗೂ ಒಂದುಸಾವಿದ ನೋಟುಗಳನ್ನು ಬ್ಯಾನ್ ಮಾಡಲಾಗಿತ್ತು. ಆಗ ಬೆಂಗಳೂರು ಒನ್ ಅನ್ನು ಉಪಯೋಗಿಸಿಕೊಂಡು ಸರಿ ಸುಮಾರು 410 ಕೋಟಿ ಅಕ್ರಮವಾಗಿ ನೋಟು ಬದಲಾವಣೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಭೈರತಿ ಬಸವರಾಜು, ಹಾಲಿ ಸಚಿವ ಸಚಿವ ಕೆ.ಜೆ.ಜಾರ್ಜ್‌ ಅವರು ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಆರ್ ರಮೇಶ್ ಮಾಡಿದ್ದಾರೆ.

ಬಿಜೆಪಿಯ ಬೆಂಗಳೂರು ನಗರ ವಕ್ತಾರ ಎನ್ ಆರ್ ರಮೇಶ್ ಅವರು ಈ ಬಗ್ಗೆ ಇಂದು ಮಾಧ್ಯಮಗೋಷ್ಠೀಯಲ್ಲಿ ಮಾತನಾಡಿ ಹಗರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಇದೇ ವೇಳೆ ಅವರು ಮಾತನಾಡಿ ಬೆಂಗಳೂರು ಒನ್ ನಲ್ಲಿ ಗ್ರಾಹಕರಿಂದ ಸಂಗ್ರಹವಾದ ಸಣ್ಣ ಮೊತ್ತದ ಹಣವನ್ನು ಅಕ್ರಮವಾಗಿ ಕೆಜೆ ಜಾರ್ಜ್, ಸಿದ್ರಾಮಯ್ಯ ಮತ್ತು ಭೈರತಿ ಬಸವರಾಜ್ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಮಾಡಿದ್ದಾರೆ.

ಈ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.