ಬೆಂಗಳೂರು: ಮತದಾರರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವ ಅಭ್ಯರ್ಥಿಗೂ ಮತ ಹಾಕಲು ಇಷ್ಟವಿರದಿದ್ದರೆ ಯಾವ ಅಭ್ಯರ್ಥಿಗೂ ನನ್ನ ಮತ ಇಲ್ಲ ಎಂದು ಸೂಚಿಸುವನೋಟಾಬಳಕೆಯು ಸುಪ್ರೀಂಕೋರ್ಟ್ ಆದೇಶದ ಮೂಲಕ ಆರಂಭವಾಗಿದೆ.

2013 ಸೆ.27ರಂದು ಆದೇಶ ಹೊರಡಿಸಿದ್ದ ಕೋರ್ಟ್ ಮತಯಂತ್ರದಲ್ಲಿನೋಟಾಆಯ್ಕೆ ಕಡ್ಡಾಯವಾಗಿ ಇರಬೇಕೆಂದು ಹೇಳಿತ್ತು. ಅದು ಹಂತ ಹಂತವಾಗಿ ಜಾರಿಯಾಯಿತು. 2013ರಲ್ಲಿ ಮೊದಲ ಬಾರಿಗೆ ಛತ್ತಿಸ್ಗಢ್, ಮಧ್ಯಪ್ರದೇಶ, ಮಿಜೋರಾಂ, ದೆಹಲಿ, ರಾಜಸ್ತಾನದಲ್ಲಿ ಬಳಕೆಯಾಗಿತ್ತು. ಈಗ ಎಲ್ಲಾ ಕಡೆ ನೋಟಾ ಚಾಲ್ತಿಗೆ ಬಂದಿದೆ.